ಪೋರ್ಟರ್, ಆನಮರೈಯ
	1780-1832. ಇಂಗ್ಲಿಷ್ ಕಾದಂಬರಿಕಾರ್ತಿ. ಡಹ್ರ್ಯಾಂನಲ್ಲಿ ಹುಟ್ಟಿ ಎಡಿನ್‍ಬರೋನಲ್ಲಿ ವಿದ್ಯಾಭ್ಯಾಸ ಮಾಡಿದಳು. ತನ್ನ ಹದಿಮೂರನೆಯ ವಯಸ್ಸಿನಲ್ಲಿ ದಿ ಆರ್ಟ್‍ಲೆಸ್ ಟೇಲ್ಸ್ ಎಂಬ ಗ್ರಂಥವನ್ನು ಬರೆಯತೊಡಗಿದಳು. ಅದು ಎರಡು ವರ್ಷಗಳ ಅನಂತರ 1795ರಲ್ಲಿ ಪ್ರಕಟಗೊಂಡಿತು. ಅನಂತರ ಬಂದ ಈಕೆಯ ಎರಡು ಕಾದಂಬರಿಗಳೆಂದರೆ ವಾಲ್ಷ್ ಕಾಲ್ವಿಲ್ (1797). ಆಕ್ಟೇವಿಯ (1798), ದಿ ಹಂಗೇರಿಯನ್ ಬ್ರದರ್ಸ್ (1807) ಎಂಬ ಈಕೆಯ ಮುಖ್ಯ ಕಾದಂಬರಿ ಫ್ರಾನ್ಸಿನ ಕ್ರಾಂತಿಯನ್ನು ಕುರಿತದ್ದು. ಡಾನ್ ಸೆಬಾಸ್ಟಿಯನ್ (1809) ಮತ್ತು ದಿ ನೈಟ್ ಆಫ್ ಸೆಂಟ್ ಜಾನ್ (1817) ಎಂಬವು ಚಾರಿತ್ರಿಕ ಕಾದಂಬರಿಗಳು. ಬ್ಯಾಲಡ್ ರೋಮಾನ್ಸಸ್ ಎಂಬುದು ಕವಿತೆಗಳ ಸಂಗ್ರಹ.
(ಎಚ್.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ